ಕುರು 1		
 	ಕೌರವರ ಮೂಲಪುರುಷ. ಚಂದ್ರವಂಶದ ಸಂವರಣ ಮತ್ತು ತಪತಿಯರ ಪುತ್ರ. ಈತನಿಗೆ ಶುಭಾಂಗಿ ವಾಹಿನಿ ಎಂದು ಇಬ್ಬರು ಪತ್ನಿಯರು. ಶುಭಾಂಗಿಯ ಮಗ ವಿದೂರಥ. ವಾಹಿನಿಯ ಸಂತತಿಯವರೇ ಕೌರವರು. 		
	(ಕೆ.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ